ಏ.ಆರ್.ಕೃಷ್ಣಶಾಸ್ತ್ರಿ
From Wikipedia
ಏ.ಆರ್.ಕೃಷ್ಣಶಾಸ್ತ್ರಿಯವರು ೧೮೯೦ ಫೆಬ್ರುವರಿ ೧೨ ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ , ತಾಯಿ ಶಂಕರಮ್ಮ. ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದು, ಕೃಷ್ಣಶಾಸ್ತ್ರಿಯವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕೃಷ್ಣಶಾಸ್ತ್ರಿಯವರ ಕೆಲವು ಕೃತಿಗಳು
- ಶ್ರೀಪತಿಯ ಕಥೆಗಳು
- ಭಾಸಕವಿ
- ಸರ್ವಜ್ಞ ಕವಿ
- ಭಾಷಣಗಳು-ಲೇಖನಗಳು
- ಕಥಾಮೃತ
- ಕವಿಜಿಹ್ವಾಬಂಧನ
- ಬಂಕಿಮಚಂದ್ರ
- ನಿರ್ಮಲ ಭಾರತಿ
- ನಿಬಂಧಮಾಲಾ
೧೯೪೧ರಲ್ಲಿ ಹೈದರಾಬಾದಿನಲ್ಲಿ ಜರುಗಿದ ೨೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೬೦ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕೃಷ್ಣಶಾಸ್ತ್ರಿಗಲಿಗೆ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತು.