ಋಷಿ
From Wikipedia
ಋಷಿ ಎಂಬೋದು ಭಾರತದ ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು 'ಋಷಿ'ಎನ್ನುತ್ತಾರೆ.ತಪಸ್ವಿ ,ಋಷಿ,ಮುನಿ ಎಲ್ಲಾ ಪರ್ಯಾಯ ಪದಗಳು.ರಾಜರ್ಷಿ(ರಾಜ+ಋಷಿ),ಮಹರ್ಷಿ(ಮಹಾ + ಋಷಿ),ಬ್ರಹ್ಮರ್ಷಿ(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ.
[ಬದಲಾಯಿಸಿ] ಸಪ್ತರ್ಷಿಗಳು
೧.ಕಶ್ಯಪ,ಅತ್ರಿ,ಭರದ್ವಾಜ,ವಿಶ್ವಾಮಿತ್ರ,ಗೌತಮ,ಜಮದಗ್ನಿ,ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
೨.ಮರೀಚಿ,ಅತ್ರಿ,ಅಂಗಿರಸ,ಪುಲಸ್ತ್ಯ,ಪುಲಹ,ಕ್ರತು,ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.
ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.