ಅರವಿಂದ ನಾಡಕರ್ಣಿ
From Wikipedia
ಅರವಿಂದ ನಾಡಕರ್ಣಿಯವರು ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬಯಿಯಲ್ಲಿ ಉದ್ಯೋಗ. ಕನ್ನಡದ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ. ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ಕೃತಿಗಳು
- ಕಾವ್ಯಾರ್ಪಣ
- ಮಾಯಾವಿ
- ಜರಾಸಂಧ
- ನಾ ಭಾರತೀಕುಮಾರ
- ನಗರಾಯಣ
- ಆತ್ಮಭಾರತ
- ಷಟ್ಪದ
- ಸಂಗ್ರಹ ಕಾವ್ಯ
- ಅಜ್ಞಾತ
- ಆಹತ
[ಬದಲಾಯಿಸಿ] ಪುರಸ್ಕಾರ
ಇವರ ಆತ್ಮಭಾರತಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.